ಬಸವಳಿದ ಬೆವರಿಗೆ, ತ೦ಗಾಳಿಯ ತುಣುಕು..
ಮರುಗುವಾ ಮನಕೆ, ಸವಿ ನೆನಪ ಮೆಲುಕು..
ಬಾಡಿರುವಾ ಬನಕೆ, ಭರವಸೆಯ ಜಿನುಗು..
ಚಿ೦ತೆಯಾ ಚಿತೆಗೆ, ಚೈತನ್ಯದ ಹೆಗಲು..
ದಾಹದಾ ದಣಿವಿಗೆ, ಮಮತೆಯಾ ಮಡಿಲು..
ರಾತ್ರಿಯಾ ಬೆನ್ನಿಗೆ, ಬೆಳ್ಳನೆಯ ಹಗಲು...
ಸಾಗುತಿಹ ದಾರಿಯಲಿ ಎಲ್ಲೆಡೆಯೂ ಕವಲು..
ಹಳೆದಾದ ಬೇರಿಗೆ ಹೊಸ ಚಿಗುರ ಸೊಬಗು-
ಸೋಕಿಸುತ ಸಾಗುವುದೇ ಬಾಳಿನಾ ಬೆಡಗು..
ಧೃತಿಗೆಡದೆ ಮತ್ತೆ ನೀ ಯತ್ನದಲಿ ತೊಡಗು..
ಮೇಲೇಳದಿರದು ಮುಳುಗಿದಾ ಹಡಗು..
ಮರುಗದಿರು ಮರುಳೇ ಬೆಳಗುವುದು ಬಾಳು...
/ - ವಿಮಾನಿ
/ - ವಿಮಾನಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ