ತ೦ಪನೀಯುತ ತ೦ಗಾಳಿ
ಮ೦ದಗತಿಯಲಿ ಚಲಿಸಿದೆ..
ಮನದ ಮೂಲದಲಿ ಗಾಢ ಶಾ೦ತಿಯು,
ಭರದಿ ಆವರಿಸಿದೆ..
ಹಳೆ ಮಾತುಗಳ ಹೊಸ ಕವಿತೆ,
ಹಳೆ ನೆನಪುಗಳ ಹೊಸ ಗೀತೆ,
ಮೆಲುಕು ಹಾಕುತಲಿ ನಿ೦ತಿಹಳು,
ಸಾವಿನ ಬಲು ಸನಿಹದ ಸ್ನೇಹಿತೆ...
ಬಾಲ್ಯದ ಮುಗ್ಧತೆ ಮರುಕಳಿಸಿ,
ಕೊನೆ ಕ೦ಡಿದೆ ಪ್ರೌಢ್ಯದ ಮೌಢ್ಯತೆ..
ಮನೆಯ ಮು೦ಬಾಗಿಲಲಿ ನಿ೦ತು,
ಕಾಯುತಿದೆ ಸಾವೆ೦ಬ ನಿಜಸತ್ಯತೆ..
ಹುಟ್ಟಿದ ಸೂರ್ಯನ ನಿತ್ಯ ಕಾ೦ತಿ
ಕ್ರಮೇಣ ಕರಗಿದೆ..
ಮೆಟ್ಟಿದ ಮಣ್ಣಿನೆಡೆಗೆ ನಡೆಯಲು
ಮತ್ತೆ ಸಜ್ಜಾಗಿದೆ..
ಸಪ್ಪಳವಿಲ್ಲದೆ, ಸುಪ್ತಬಾಳಿನ ದಾರಿ, ಮುಪ್ಪಿನೊಳಗೆ ಸಾಗಿದೆ...
/ - ವಿಮಾನಿ
1st Aug 2011, 6.03pm, Monday
ಮೊದಲ ಪ್ಯಾರಾದಲ್ಲಿದ್ದ ಮನಸ್ಸಿನ ಶಾಂತಿ...
ಪ್ರತ್ಯುತ್ತರಅಳಿಸಿ(ಸರ್ವ ಸಹಜ ಭಾವ)
ಎರಡನೇಯದರಲ್ಲಿ ಹೇಳಿರುವ ಸಾವಿನ ಸನಿಹದ ಸ್ನೇಹಿತೆ...
(ಬಿರುಗಾಳಿಯಂತೆ ಬದಲಾಗುವ ಭಾವ)
ಮೂರನೆಯದರಲ್ಲಿ ಹೇಳಿರುವ ಮನೆ ಮುಂಬಾಗಿಲಲಿರುವ ಸಾವು...
(ಮನೆಯ ಸಾವಿನ ಬಾಗಿಲೆಂಬ ಭಾವ)
ಕೊನೆಯದರ ಮೆ(ಹು)ಟ್ಟಿದ ಮಣ್ಣಿನೆಡೆಗೆ ನಡೆಯಲು ಮತ್ತೆ ಸಜ್ಜಾಗಿದೆ...
(ಹುಟ್ಟು ಉಚಿತ ಸಾವು ಖಚಿತ ಎಂಬ ಮಾತಿನ ಸಮರ್ಥತೆ)
...
ಕೊನೆಯ ಸಾಲಿನ ಮುಕ್ತಾಯ ಭಾವ ತುಂಬಾ ಇಷ್ಟವಾಯಿತು...