ಮು೦ಜಾನೆ ಮುಸುಕಲಿ, ಚಿನ್ನದಾ ತೇರಲಿ
ಚಿಗುರೊಡೆದ ರವಿ ಕಿರಣ...
ಆಗಸದಿ ಜಾರಿ, ಭುವಿಯೊಡಲ ಸೇರಲು,
ಹೂವಾಯ್ತು ಮೊಗ್ಗಿನ ಬನ...
ಸ೦ಗೀತ ಗುನುಗುತ, ನದಿಯೊ೦ದು ಹರಿದಿರೆ,
ಶುರುವಾಯ್ತು ಈ ಸುದಿನ...
ಹಕ್ಕಿಗಳಾ ವೃ೦ದ ಹಾಡುತ ನೀಡಿವೆ,
ಮೋಡಕೆ ಆಮ೦ತ್ರಣ..
ಆ ಕಲರವವ ಕೇಳಿ, ಮೇಘವದು ಬಾಗಿ,
ಮಳೆ ಹನಿಯ ಆಹ್ವಾನ..
ಹನಿ ಹನಿಯ ಸರಣಿ, ನೆನೆ ನೆನೆದು ಧರಣಿ,
ತಣಿದಿದೆ ಈ ಭುವನ..
ವರ್ಷದಾ ಸ್ಪರ್ಶಕೆ, ನಾಚಿರಲು ಅವನಿ,
ಎಲ್ಲೆಲ್ಲೂ ಸ೦ಕ್ರಮಣ..
ನಯನಗಳು ನಲಿದಿವೆ, ಸ೦ಭ್ರಮಿಸಿ ನೋಡಿ,
ಸೃಷ್ಟಿಯಾ ಈ ಚು೦ಬನ..
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ