ಅಲ್ಲೆಲ್ಲೋ ಸೂರ್ಯನು ಸೇರುತಿರುವಾಗ ಕಡಲ ಮಡಿಲು,
ನನಗಾಗಿ ಕಾದಿತ್ತು ಇಲ್ಲೊ೦ದು ಪ್ರೀತಿಯ ಒಡಲು,
ದಿನಕರನ ಕಿರಣಗಳೆಲ್ಲವು ಕೆ೦ಪೇರುವ ಮೊದಲು,
ಮನದನ್ನೆಯ ಮೊಗದಿ ಕ೦ಡಿತ್ತು ಸ೦ತಸದ ಹೊನಲು..
ಅವ ಮರೆ ಸರಿಯುವುದು ಮೊದಲೋ,
ಇವ ಮನೆ ಸೇರುವುದು ಮೊದಲೋ,
ಎ೦ದು ಮರಳುತಿಹ ಅಲೆಗಳ ಪ್ರಶ್ನಿಸುತ ಕುಳಿತಿರೆ ನನ್ನ ಮಲ್ಲಿಗೆಯ ಎಸಳು,
ಬರಬಾರದೆ, ನಿನಗಾಗಿ ಕಾಯುತಿಹಳು ನನ್ನೊಡತಿ ಎ೦ದಿತ್ತು ಬಾಗಿಲಿನ ಹೊಸಿಲು...
ಮೋಡವೆ ನೀ ಓಡದಿರು, ಕೋಗಿಲೆ ನೀ ಹಾಡುತಿರು,
ಎ೦ದು ಗುನುಗುತ, ಅವಳು ನನಗಾಗಿ ಕಾದಿರಲು,
ಇದೋ ಬ೦ದಿರುವೆ ನಾ ನಲ್ಲೆ, ಕಾಯುವುದು ಇನ್ನೆಲ್ಲೇ,
ಎನ್ನುತ - ಅವಳ ಮುಡಿಗಿಟ್ಟೆ ನಾ ತ೦ದ ಹೂ ಮಲ್ಲೆ...
30th July 2011, 1am, Saturday
ಇನಿಯನ ಬರುವಿಗಾಗಿ ಕಾದ ನಲ್ಲೆ
ಪ್ರತ್ಯುತ್ತರಅಳಿಸಿಅವಳ ಸೇರಲು ಕಾತರನಾದ ಇನಿಯ
ಭೇಷ್! ಒಳ್ಳೆಯ ಚಿತ್ರಣ...
ನನ್ನ ಬ್ಲಾಗಿಗೂ ಬನ್ನಿರಿ:
www.badari-poems.blogspot.com
ಧನ್ಯವಾದಗಳು ಬದರೀನಾಥ್ ರವರೆ.. :)
ಪ್ರತ್ಯುತ್ತರಅಳಿಸಿ